Skip to contentವಿಷಯಕ್ಕೆ ಹೋಗಿ
WhatsAppವಾಟ್ಸಾಪ್
Rancher · No.1 Carbon-Fibre Dotiರಾಂಚರ್ - ನಂ. 1 ಕಾರ್ಬನ್-ಫೈಬರ್ ದೋಟಿ (NO.1 CARBON-FIBRE DOTI)

Harvest 80 feet.
Feet on the ground.
80 ಅಡಿ ಎತ್ತರದ ಕೊಯ್ಲು.
ನೆಲದಲ್ಲೇ ನಿಂತು ಸುಲಭವಾಗಿ.

Rancher Doti is a carbon fibre telescopic doti for arecanut and coconut. One person cuts bunches from 50–80 ft palms while standing on the ground. ರಾಂಚರ್ ದೋಟಿ — ಅಡಿಕೆ ಮತ್ತು ತೆಂಗಿನ ಮರಗಳಿಗಾಗಿ ರೂಪಿಸಲಾದ ಕಾರ್ಬನ್ ಫೈಬರ್ ಟೆಲಿಸ್ಕೋಪಿಕ್ ದೋಟಿ. ಮರ ಹತ್ತದೇ, ನೆಲದಲ್ಲೇ ನಿಂತು ಒಬ್ಬರೇ 50 ರಿಂದ 80 ಅಡಿ ಎತ್ತರದ ಗೊನೆಗಳನ್ನು ಕೊಯ್ಯಬಹುದು.

A farmer standing on the ground in an arecanut plantation, raising a red Rancher Doti telescopic pole into the crown of a tall areca palm
Price fromಆರಂಭಿಕ ಬೆಲೆ ₹38,900 ₹52,000 25% OFF25% ಉಳಿತಾಯ Instant factory savings of ₹13,100 · Incl. all taxes₹13,100 ಉಳಿತಾಯ · GST ಮತ್ತು ತೆರಿಗೆ ಸೇರಿದಂತೆ

Four reach grades, ₹38,900 to ₹59,900, chosen by how tall your palms are. Indicative from-prices — the Keelambi team confirms the final figure. ಮರದ ಎತ್ತರಕ್ಕೆ ತಕ್ಕಂತೆ 4 ಮಾದರಿಗಳು (₹38,900 ರಿಂದ ₹59,900). ಇದು ಅಂದಾಜು ಬೆಲೆ — ಕೀಳಂಬಿ ತಂಡವು ಅಂತಿಮ ದರವನ್ನು ಖಚಿತಪಡಿಸುತ್ತದೆ.

Reachಎತ್ತರದ ವ್ಯಾಪ್ತಿ
50–80 ft 15.2–24.4 m50–80 ಅಡಿ
Pole weightದೋಟಿಯ ತೂಕ
1.25–1.95 kg1.25–1.95 ಕೆಜಿ
Two jobsಎರಡು ಕೆಲಸಗಳು
Harvest + sprayಅಡಿಕೆ ಕೊಯ್ಲು + ಸಿಂಪಡಣೆ
Engineered & servicedವಿನ್ಯಾಸ ಮತ್ತು ಸರ್ವೀಸ್
Shivamoggaಶಿವಮೊಗ್ಗ
The problemಇಂದಿನ ವಾಸ್ತವ

Your arecanut trees keep growing.
Finding someone to climb them shouldn't decide your harvest.
ಅಡಿಕೆ ಮರಗಳು ಎತ್ತರ ಬೆಳೆಯುತ್ತಲೇ ಇರುತ್ತವೆ.
ಆದರೆ ಆಳು ಸಿಗಲಿಲ್ಲವೆಂದು ಕೊಯ್ಲು ತಡವಾಗಬಾರದು.

Arecanut and coconut ripen high up, on slender palms. For generations the answer has been a climber. That answer is getting harder to find every season. ಅಡಿಕೆ ಮತ್ತು ತೆಂಗಿನ ಗೊನೆಗಳು ಎತ್ತರದ ತುದಿಯಲ್ಲಿರುತ್ತವೆ. ತಲೆಮಾರುಗಳಿಂದ ಮರ ಹತ್ತುವವರೇ ಇದಕ್ಕೆ ಪರಿಹಾರವಾಗಿದ್ದರು. ಆದರೆ ಈಗ ಪ್ರತಿ ಋತುವಿನಲ್ಲೂ ಮರ ಹತ್ತುವ ಆಳುಗಳು ಸಿಗುವುದು ಕಷ್ಟವಾಗುತ್ತಿದೆ.

01 The climber decides when you harvestಕೊಯ್ಲಿನ ಸಮಯ ಆಳುಗಳ ಕೈಯಲ್ಲಿದೆ

The crop ripens on its own calendar. The climber comes on his. When the two don't meet, the bunch waits on the tree.ಬೆಳೆ ತನ್ನದೇ ಕಾಲಕ್ಕೆ ಸರಿಯಾಗಿ ಮಾಗುತ್ತೆ. ಆದರೆ ಆಳುಗಳು ತಮಗೆ ಬಿಡುವಿದ್ದಾಗ ಬರುತ್ತಾರೆ. ಅವರಿಬ್ಬರ ಸಮಯ ಹೊಂದಾಣಿಕೆಯಾಗದಿದ್ದರೆ ಹಣ್ಣಾದ ಗೊನೆ ಮರದಲ್ಲೇ ಕಾಯಬೇಕಾಗುತ್ತದೆ.

02 Skilled hands are hard to findಮರ ಹತ್ತುವ ಪರಿಣಿತರ ತೀವ್ರ ಕೊರತೆ

Climbing a 60-foot palm is skilled work, and fewer people take it up. Keelambi hears the same sentence on every estate: workers don't show up when you need them most.60 ಅಡಿ ಎತ್ತರದ ಮರ ಹತ್ತುವುದು ಕಷ್ಟದ ಕೆಲಸ. ಈಗಿನ ಪೀಳಿಗೆಯವರು ಈ ಕೆಲಸಕ್ಕೆ ಬರುತ್ತಿಲ್ಲ. ಪ್ರತಿಯೊಂದು ತೋಟದಲ್ಲೂ ಕೇಳಿಬರುವ ಮಾತೊಂದೇ: 'ಅಗತ್ಯವಿದ್ದಾಗ ಕೆಲಸಕ್ಕೆ ಜನ ಸಿಗುತ್ತಿಲ್ಲ'.

03 Somebody still has to go upಪ್ರಾಣಾಪಾಯದ ಆತಂಕ ತಪ್ಪಿದ್ದಲ್ಲ

Every harvest round, and every high spray round, someone climbs 50 to 80 feet of thin trunk. That is a risk the farm carries season after season.ಪ್ರತಿ ಕೊಯ್ಲಿಗೂ, ಪ್ರತಿ ಬಾರಿ ಮದ್ದು ಹೊಡೆಯುವುದಕ್ಕೂ ಯಾರಾದರೂ 50 ರಿಂದ 80 ಅಡಿ ಎತ್ತರದ ಸಪೂರ ಮರ ಹತ್ತಲೇಬೇಕು. ಇದು ಪ್ರತಿ ಸೀಸನ್‌ನಲ್ಲೂ ತೋಟದ ಮಾಲೀಕರು ಹೊರಬೇಕಾದ ದೊಡ್ಡ ರಿಸ್ಕ್.

Start hereಇಲ್ಲಿಂದ ತಿಳಿಯಿರಿ

What is a doti?ದೋಟಿ ಎಂದರೇನು?

A doti (ದೋಟಿ) is the long harvesting pole Karnataka farmers have always used to cut arecanut and coconut bunches down from the tree without climbing it. A blade sits at the top; the farmer works from the ground. Farmers also call it a gala, an arecanut pole, or simply a harvesting pole. ದೋಟಿ (ದೋಟಿ / ಗಳ) ಎಂದರೆ ಕರ್ನಾಟಕದ ಕೃಷಿಕರು ಮರ ಹತ್ತದೇ ನೆಲದಲ್ಲೇ ನಿಂತು ಅಡಿಕೆ ಮತ್ತು ತೆಂಗಿನ ಗೊನೆ ಕೊಯ್ಯಲು ಮೊದಲಿನಿಂದಲೂ ಬಳಸುತ್ತಿರುವ ಉದ್ದನೆಯ ಕೊಯ್ಲಿನ ಕೋಲು. ತುದಿಯಲ್ಲಿ ಹರಿತವಾದ ಕೊಯ್ದೆ ಕತ್ತಿ ಇರುತ್ತದೆ; ಕೃಷಿಕರು ನೆಲದಲ್ಲಿ ನಿಂತೇ ಕೊಯ್ಯುತ್ತಾರೆ.

A carbon fibre doti is that same tool built from carbon fibre instead of bamboo or aluminium. Carbon fibre is what makes the difference at height: a pole that reaches 80 feet weighs under two kilograms, so one person can hold it steady, aim it at the bunch, and keep going palm after palm. ಕಾರ್ಬನ್ ಫೈಬರ್ ದೋಟಿ ಎಂದರೆ ಅದೇ ಸಾಂಪ್ರದಾಯಿಕ ಸಾಧನವನ್ನು ಬಿದಿರು ಅಥವಾ ಅಲ್ಯೂಮಿನಿಯಂ ಬದಲಿಗೆ ಹಗುರವಾದ 'ಕಾರ್ಬನ್ ಫೈಬರ್'ನಿಂದ ತಯಾರಿಸಿರುವುದು. 80 ಅಡಿ ಉದ್ದದ ದೋಟಿಯೂ ಕೇವಲ 2 ಕೆಜಿಗಿಂತ ಕಡಿಮೆ ತೂಗುತ್ತದೆ. ಹೀಗಾಗಿ ಒಬ್ಬರೇ ಇದನ್ನು ಸರಾಗವಾಗಿ ಹಿಡಿದು, ಗೊನೆಗೆ ಗುರಿ ಇಟ್ಟು, ಮರದಿಂದ ಮರಕ್ಕೆ ಸುಲಭವಾಗಿ ಕೊಯ್ಯುತ್ತಾ ಹೋಗಬಹುದು.

Rancher Doti is Keelambi's carbon fibre doti, carried under the Rancher brand and engineered and serviced from Shivamogga. It telescopes out to a chosen reach, locks at every joint, and takes either a koythe cutting head for harvesting or a spray head for high-reach spraying. ರಾಂಚರ್ ದೋಟಿ ಕೀಳಂಬಿ ಸಂಸ್ಥೆಯ ವಿಶ್ವಾಸಾರ್ಹ ಕಾರ್ಬನ್ ಫೈಬರ್ ದೋಟಿ. ಇದು ಶಿವಮೊಗ್ಗದಲ್ಲೇ ವಿನ್ಯಾಸಗೊಂಡು ಸರ್ವೀಸ್ ಬೆಂಬಲ ಪಡೆಯುತ್ತದೆ. ಇದನ್ನು ಬೇಕಾದಷ್ಟು ಎತ್ತರಕ್ಕೆ ಚಾಚಬಹುದು (Telescopic), ಪ್ರತಿ ಜಾಯಿಂಟ್‌ನಲ್ಲಿ ಭದ್ರವಾಗಿ ಲಾಕ್ ಆಗುತ್ತದೆ, ಹಾಗೂ ಕೊಯ್ಲಿನ ಕತ್ತಿ (ಕೊಯ್ದೆ) ಅಥವಾ ಎತ್ತರಕ್ಕೆ ಮದ್ದು ಹೊಡೆಯುವ ಸ್ಪ್ರೇ ಹೆಡ್ ಎರಡನ್ನೂ ಇದಕ್ಕೆ ಜೋಡಿಸಬಹುದು.

The traditional wayಸಾಂಪ್ರದಾಯಿಕ ವಿಧಾನ

  1. Find a climber who is free.ಮರ ಹತ್ತುವವರು ಬಿಡುವಾಗುವವರೆಗೆ ಕಾಯಬೇಕು.
  2. Harvest when he can come, not when the crop is ready.ಬೆಳೆ ಮಾಗಿದ ತಕ್ಷಣವಲ್ಲ, ಆಳು ಸಿಕ್ಕಾಗ ಮಾತ್ರ ಕೊಯ್ಲು ಸಾಧ್ಯ.
  3. Someone goes up 50 to 80 feet.ಪ್ರತಿ ಮರಕ್ಕೂ 50 ರಿಂದ 80 ಅಡಿ ಎತ್ತರಕ್ಕೆ ಯಾರಾದರೂ ಹತ್ತಲೇಬೇಕು.
  4. Pay a climbing wage — every round, every season.ಪ್ರತಿ ಸುತ್ತಿನ ಕೊಯ್ಲಿಗೂ, ಪ್ರತಿ ಸೀಸನ್‌ನಲ್ಲೂ ಮರ ಹತ್ತುವ ಕೂಲಿ ತೆರಬೇಕು.

With Rancher Dotiರಾಂಚರ್ ದೋಟಿಯೊಂದಿಗೆ

  1. Extend the pole from where you stand.ನಿಂತ ಜಾಗದಿಂದಲೇ ದೋಟಿಯನ್ನು ಮೇಲಕ್ಕೆ ಚಾಚಿ.
  2. Reach the bunch at 50 to 80 feet.50 ರಿಂದ 80 ಅಡಿ ಎತ್ತರದ ಗೊನೆಯನ್ನು ಸುಲಭವಾಗಿ ತಲುಪಿ.
  3. Cut with the koythe head, or fit the spray head.ಕೊಯ್ದೆ ಕತ್ತಿಯಿಂದ ಸರಾಗವಾಗಿ ಕೊಯ್ಯಿರಿ, ಅಥವಾ ಸ್ಪ್ರೇ ಹೆಡ್ ಹಾಕಿ ಮದ್ದು ಹೊಡೆಯಿರಿ.
  4. Move to the next palm in seconds — on your own schedule.ಯಾರ ಹಂಗೂ ಇಲ್ಲದೆ, ನಿಮ್ಮದೇ ಸಮಯದಲ್ಲಿ ಕೆಲವೇ ಸೆಕೆಂಡುಗಳಲ್ಲಿ ಮುಂದಿನ ಮರಕ್ಕೆ ಸಾಗಿ.
How it worksಕೆಲಸ ಮಾಡುವ ವಿಧಾನ

Four steps. No motor, no battery, nothing to charge.ನಾಲ್ಕೇ ಹಂತಗಳು. ಮೋಟರ್ ಇಲ್ಲ, ಬ್ಯಾಟರಿ ಇಲ್ಲ, ಚಾರ್ಜಿಂಗ್ ಜಂಜಾಟವೇ ಇಲ್ಲ.

One person, one pole. The Doti goes up to the bunch — the operator's feet never leave the ground. ಒಬ್ಬರೇ ವ್ಯಕ್ತಿ, ಒಂದೇ ದೋಟಿ. ದೋಟಿ ನೇರವಾಗಿ ಗೊನೆಯನ್ನು ತಲುಪುತ್ತದೆ — ನಿಮ್ಮ ಕಾಲುಗಳು ನೆಲ ಬಿಟ್ಟು ಏಳುವುದಿಲ್ಲ.
1 Extendಮೇಲಕ್ಕೆ ಚಾಚಿ (Extend)

The pole telescopes out of itself — 4 sections on the CFP-50, up to 7 on the CFP-80. Closed, it is about 4.5 feet long and carries on a two-wheeler.ದೋಟಿ ಒಂದರೊಳಗಿಂದ ಇನ್ನೊಂದು ಸರಾಗವಾಗಿ ಹೊರಬರುತ್ತದೆ — CFP-50 ಮಾದರಿಯಲ್ಲಿ 4 ಸೆಕ್ಷನ್‌ಗಳು, CFP-80 ನಲ್ಲಿ 7 ಸೆಕ್ಷನ್‌ಗಳು. ಮಡಚಿದಾಗ ಕೇವಲ 4.5 ಅಡಿ ಉದ್ದವಿದ್ದು, ಬೈಕ್‌ನಲ್ಲೇ ಸುಲಭವಾಗಿ ಕೊಂಡೊಯ್ಯಬಹುದು.

2 Lockಭದ್ರವಾಗಿ ಲಾಕ್ ಮಾಡಿ (Lock)

Every joint closes on two independent locks. Keelambi's stated claim for the double-lock clamp system is zero slip at any height.ಪ್ರತಿ ಜಾಯಿಂಟ್‌ನಲ್ಲೂ ಎರಡು ಸ್ವತಂತ್ರ ಲಾಕ್‌ಗಳು ಕೂರುತ್ತವೆ. ಎಷ್ಟೇ ಎತ್ತರದಲ್ಲಿದ್ದರೂ ಪೈಪ್ ತುಸು ಜಾರುವುದಿಲ್ಲ (Zero Slip).

3 Reachಗೊನೆಗೆ ತಲುಪಿಸಿ (Reach)

Raise it to the bunch. The grade you own sets the reach — 50, 60, 70 or 80 feet. GripTact texture on the shaft keeps the hold steady through a long round.ದೋಟಿಯನ್ನು ನೇರವಾಗಿ ಗೊನೆಯ ಹತ್ತಿರಕ್ಕೆ ಏರಿಸಿ. ನೀವು ಆಯ್ದ ಮಾಡೆಲ್ ಪ್ರಕಾರ 50, 60, 70 ಅಥವಾ 80 ಅಡಿ ತಲುಪುತ್ತದೆ. ಗ್ರಿಪ್‌ಟ್ಯಾಕ್ಟ್ (GripTact) ಹಿಡಿಕೆಯು ದೀರ್ಘಕಾಲ ಕೆಲಸ ಮಾಡಿದರೂ ಕೈ ಜಾರದಂತೆ ದೃಢವಾಗಿ ಹಿಡಿದಿಡುತ್ತದೆ.

4 Cut or sprayಕೊಯ್ಯಿರಿ ಅಥವಾ ಸ್ಪ್ರೇ ಮಾಡಿ (Cut or Spray)

Fit the koythe cutting head for harvest, or the spray head for high-reach spraying. One pole, two jobs, feet on the ground for both.ಕೊಯ್ಲಿಗಾಗಿ ಹರಿತವಾದ ಕೊಯ್ದೆ ಕತ್ತಿ ಅಥವಾ ಎತ್ತರದ ಸಿಂಪಡಣೆಗಾಗಿ ಸ್ಪ್ರೇ ಹೆಡ್ ಜೋಡಿಸಿ. ಒಂದೇ ದೋಟಿ, ಎರಡು ಕೆಲಸಗಳು — ಎರಡೂ ನೆಲದಲ್ಲೇ ನಿಂತು.

Printed on every Rancher Dotiಪ್ರತಿಯೊಂದು ರಾಂಚರ್ ದೋಟಿಯ ಮೇಲೂ ಮುದ್ರಿಸಲಾಗಿದೆ

“Caution: This Pole Transmits Electricity.” The warning is on the pole itself. Look up before you raise it, and talk to us on 843 11 33 888 if you are unsure about a particular plot. “ಎಚ್ಚರಿಕೆ: ಈ ದೋಟಿಯು ವಿದ್ಯುತ್ ವಾಹಕವಾಗಿದೆ (Electricity Transmits).” ತೋಟದಲ್ಲಿ ದೋಟಿ ಎತ್ತುವ ಮುನ್ನ ಮೇಲೆ ಹಾದುಹೋಗುವ ವಿದ್ಯುತ್ ತಂತಿಗಳಿವೆಯೇ ಎಂದು ಖಚಿತವಾಗಿ ನೋಡಿ. ಅನುಮಾನವಿದ್ದರೆ ನಮಗೆ ಕರೆ ಮಾಡಿ: 843 11 33 888.

Choose your reachನಿಮ್ಮ ತೋಟಕ್ಕೆ ಸರಿಯಾದ ಅಳತೆ

Four grades. Buy by your tree height, not by the number.ನಾಲ್ಕು ಮಾದರಿಗಳು. ಕೇವಲ ನಂಬರ್ ನೋಡಿ ಅಲ್ಲ, ನಿಮ್ಮ ಮರದ ಎತ್ತರಕ್ಕೆ ತಕ್ಕಂತೆ ಆರಿಸಿ.

The grade number is the pole's reach — not your tree heightದೋಟಿಯ ಗ್ರೇಡ್ ನಂಬರ್ ಅಂದರೆ ಅದು ತಲುಪುವ ಗರಿಷ್ಠ ಎತ್ತರ — ಮರದ ಎತ್ತರವಲ್ಲ

You need working reach above the bunch, so the recommended tree height is always lower than the grade. If your palms are 60 ft, the answer is the CFP-70, not the CFP-60. Use the matcher below.ಗೊನೆಯನ್ನು ಸುಲಭವಾಗಿ ಕೊಯ್ಯಲು ಮರಕ್ಕಿಂತ ತುಸು ಎತ್ತರದ ದೋಟಿ ಬೇಕಾಗುತ್ತದೆ. ಹೀಗಾಗಿ ಶಿಫಾರಸು ಮಾಡಿದ ಮರದ ಎತ್ತರವು ದೋಟಿಯ ಅಳತೆಗಿಂತ ಕಡಿಮೆ ಇರುತ್ತದೆ. ಉದಾಹರಣೆಗೆ ನಿಮ್ಮ ಮರಗಳು 60 ಅಡಿ ಇದ್ದರೆ, CFP-60 ಬದಲಿಗೆ CFP-70 ದೋಟಿ ಆಯ್ಕೆ ಮಾಡಿಕೊಳ್ಳಿ.

How tall are your tallest palms?ನಿಮ್ಮ ತೋಟದಲ್ಲಿ ಅತಿ ಎತ್ತರದ ಮರ ಎಷ್ಟು ಅಡಿ ಇದೆ?

Where a garden has mixed heights, pick the tallest — the taller grade covers both.ಮಿಶ್ರ ಎತ್ತರದ ಮರಗಳಿದ್ದರೆ, ಅತಿ ಎತ್ತರದ ಮರಕ್ಕೆ ತಕ್ಕ ಮಾಡೆಲ್ ಆರಿಸಿ — ಅದು ಸಣ್ಣ ಮರಗಳಿಗೂ ಹೊಂದುತ್ತದೆ.

Before you buy any doti — from anyoneಯಾರ ಬಳಿಯೇ ಆಗಲಿ, ಯಾವುದೇ ದೋಟಿ ಖರೀದಿಸುವ ಮುನ್ನ ಈ ಎಚ್ಚರಿಕೆ ಇರಲಿ

Measure the pole before you buy it. Carry a ₹50 measuring tape to the shop. It can save you thousands of rupees — even with us.ಅಂಗಡಿಗೆ ಹೋಗುವಾಗ ₹50 ರ ಅಳತೆ ಟೇಪ್ (Measuring Tape) ತೆಗೆದುಕೊಂಡು ಹೋಗಿ ದೋಟಿಯ ನಿಜವಾದ ಉದ್ದವನ್ನು ಅಳೆದು ನೋಡಿ. ಇದರಿಂದ ನಿಮ್ಮ ಸಾವಿರಾರು ರೂಪಾಯಿ ಉಳಿತಾಯವಾಗುತ್ತದೆ — ನಮ್ಮಲ್ಲಿ ಖರೀದಿಸುವಾಗಲೂ ಇದನ್ನು ಪರೀಕ್ಷಿಸಬಹುದು.

Specificationsತಾಂತ್ರಿಕ ವಿವರಗಳು

Every published number, in one table.ಪ್ರತಿಯೊಂದು ನಿಖರ ಅಳತೆ, ಒಂದೇ ಕೋಷ್ಟಕದಲ್ಲಿ.

The important numbers for the grade you selected are summarised here. Open the full table to compare all four. ನೀವು ಆಯ್ಕೆ ಮಾಡಿದ ಮಾಡೆಲ್‌ನ ಪ್ರಮುಖ ವಿವರಗಳು ಇಲ್ಲಿವೆ. ನಾಲ್ಕೂ ಮಾಡೆಲ್‌ಗಳನ್ನು ಹೋಲಿಸಲು ಪೂರ್ಣ ಪಟ್ಟಿಯನ್ನು ತೆರೆಯಿರಿ.

Compare all technical specifications ಎಲ್ಲಾ ತಾಂತ್ರಿಕ ವಿವರಗಳನ್ನು ಹೋಲಿಸಿ ನೋಡಿ
Rancher Doti — reach grades and published specifications ರಾಂಚರ್ ದೋಟಿ — ಎತ್ತರದ ಗ್ರೇಡ್ ಮತ್ತು ಪ್ರಕಟಿತ ವಿವರಗಳು

Figures are as published by Keelambi and are approximate. Prices are indicative from-prices — the final figure depends on grade and accessories. Warranty terms, delivery and spray-head pricing are confirmed by the Keelambi team for your order. ಅಂಕಿಅಂಶಗಳು ಕೀಳಂಬಿ ಪ್ರಕಟಿಸಿದಂತೆ, ಅಂದಾಜು. ಬೆಲೆಗಳು ಸೂಚಕ ಆರಂಭಿಕ ಬೆಲೆ — ಅಂತಿಮ ಬೆಲೆ ಗ್ರೇಡ್ ಮತ್ತು ಸಾಧನಗಳ ಮೇಲೆ ಅವಲಂಬಿತ. ವಾರಂಟಿ, ಡೆಲಿವರಿ ಮತ್ತು ಸ್ಪ್ರೇ ಹೆಡ್ ಬೆಲೆಯನ್ನು ನಿಮ್ಮ ಆರ್ಡರ್‌ಗೆ ಕೀಳಂಬಿ ತಂಡ ಖಚಿತಪಡಿಸುತ್ತದೆ.

How it is builtತಯಾರಿಕೆಯ ವೈಶಿಷ್ಟ್ಯ

Light enough to hold up. Stiff enough to work at full reach.ಎತ್ತರಕ್ಕೆ ಹಿಡಿಯಲು ಹಗುರ. ಗರಿಷ್ಠ ಎತ್ತರದಲ್ಲೂ ಬಾಗದಷ್ಟು ಗಟ್ಟಿಮುಟ್ಟು.

Carbotex-HM materialಕಾರ್ಬೋಟೆಕ್ಸ್-HM ಸಾಮಗ್ರಿ (Carbotex-HM)

High-modulus carbon fibre with advanced layering, for a high strength-to-weight ratio and long life. This is why an 80-foot pole weighs about 1.95 kg.ಹೈ-ಮಾಡ್ಯುಲಸ್ ಕಾರ್ಬನ್ ಫೈಬರ್ ತಂತ್ರಜ್ಞಾನ. ತೂಕ ಅತ್ಯಂತ ಕಡಿಮೆ ಇದ್ದರೂ ಗರಿಷ್ಠ ಬಲ ನೀಡುತ್ತದೆ ಮತ್ತು ದೀರ್ಘಕಾಲ ಬಾಳಿಕೆ ಬರುತ್ತದೆ. ಇದೇ ಕಾರಣಕ್ಕೆ 80 ಅಡಿ ದೋಟಿಯೂ ಕೇವಲ 1.95 ಕೆಜಿ ತೂಗುತ್ತದೆ.

1.95kgkg the weight of the 80 ft CFP-8080 ಅಡಿ CFP-80 ದೋಟಿಯ ನಿಖರ ತೂಕ

A Rancher Doti CFP-80 photographed in the studio, part-extended on the diagonal, showing the stack of red double-lock clamps and the GripTact marking on the red shaft
Double-lock + interlock clampsಡಬಲ್-ಲಾಕ್ + ಇಂಟರ್‌ಲಾಕ್ ಕ್ಲ್ಯಾಂಪ್‌ಗಳು

Two independent locks at every joint. Keelambi's stated claim is zero slip and operator safety at any height.ಪ್ರತಿ ಜಾಯಿಂಟ್‌ನಲ್ಲೂ ಒಂದರ ಹಿಂದೆ ಒಂದರಂತೆ ಎರಡು ಸ್ವತಂತ್ರ ಲಾಕ್‌ಗಳು. ಯಾವುದೇ ಎತ್ತರದಲ್ಲೂ ಜಾರದಂತೆ ಕೀಳಂಬಿ ಖಾತರಿ ನೀಡುತ್ತದೆ.

The clamp stack, turning. Two locks at every joint, one behind the other. ತಿರುಗುವ ಕ್ಲ್ಯಾಂಪ್ ಸೆಟ್. ಪ್ರತಿ ಜಾಯಿಂಟ್‌ನಲ್ಲೂ ಭದ್ರತೆಗಾಗಿ ಒಂದರ ಹಿಂದೆ ಒಂದು ಡಬಲ್ ಲಾಕ್.
GripTact gripಗ್ರಿಪ್‌ಟ್ಯಾಕ್ಟ್ ಹ್ಯಾಂಡಲ್ ಹಿಡಿತ (GripTact)

An engineered grip texture along the shaft for a sure, comfortable hold and less fatigue over long hours.ದೋಟಿಯ ಪೈಪ್ ಮೇಲೆ ವಿಶೇಷ ಗ್ರಿಪ್ ವಿನ್ಯಾಸವಿದ್ದು, ಕೈ ಜಾರದೆ ದೃಢವಾಗಿ ಹಿಡಿಯಬಹುದು. ಗಂಟೆಗಟ್ಟಲೆ ಕೆಲಸ ಮಾಡಿದರೂ ಕೈ ಸುಸ್ತಾಗುವುದಿಲ್ಲ.

Precision cutting headಹರಿತವಾದ ಕೊಯ್ದೆ ಕತ್ತಿ (Precision Cutting Head)

A sharp, replaceable koythe blade for clean cuts with minimal fruit drop.ಚೂಪಾದ, ಬದಲಾಯಿಸಬಹುದಾದ ಕೊಯ್ದೆ ಕತ್ತಿ. ಗೊನೆಯನ್ನು ಸರಾಗವಾಗಿ ಕತ್ತರಿಸುತ್ತದೆ ಮತ್ತು ಕಾಯಿಗಳು ನೆಲಕ್ಕುರುಳಿ ಹಾಳಾಗುವುದನ್ನು ತಪ್ಪಿಸುತ್ತದೆ.

Where it helpsಬಳಕೆಯ ಕ್ಷೇತ್ರಗಳು

One pole. The two jobs that need height.ಒಂದೇ ದೋಟಿ. ಎತ್ತರದಲ್ಲಿ ಮಾಡಬೇಕಾದ ಎರಡೂ ಕೆಲಸಗಳಿಗೆ.

Arecanut harvesting without climbingಮರ ಹತ್ತದೇ ಅಡಿಕೆ ಕೊಯ್ಲು

This is what an arecanut harvesting pole is for. Fit the koythe cutting head, raise the pole to the bunch, and cut. The blade is sharp and replaceable, for clean cuts with minimal fruit drop. Coconut works the same way. ಅಡಿಕೆ ದೋಟಿಯ ಮುಖ್ಯ ಉದ್ದೇಶವೇ ಇದು. ಕೊಯ್ದೆ ಕತ್ತಿಯನ್ನು ತುದಿಗೆ ಜೋಡಿಸಿ, ದೋಟಿಯನ್ನು ಗೊನೆಗೆ ತಾಗಿಸಿ ಕತ್ತರಿಸಿ. ಹರಿತವಾದ ಬ್ಲೇಡ್ ಇರುವುದರಿಂದ ಕಾಯಿ ಉದುರದಂತೆ ಸುಲಭವಾಗಿ ಕೊಯ್ಯಬಹುದು. ತೆಂಗಿನ ಕೊಯ್ಲಿಗೂ ಇದೇ ರೀತಿ ಕೆಲಸ ಮಾಡುತ್ತದೆ.

  • Harvest when the crop is ready, not when a climber is free.ಬೆಳೆ ಮಾಗಿದ ತಕ್ಷಣ ಕೊಯ್ಯಿರಿ, ಮರ ಹತ್ತುವವರಿಗಾಗಿ ದಿನಗಟ್ಟಲೆ ಕಾಯಬೇಕಿಲ್ಲ.
  • Move pole-to-palm across the garden in seconds.ತೋಟದಲ್ಲಿ ಮರದಿಂದ ಮರಕ್ಕೆ ಕೆಲವೇ ಕ್ಷಣಗಳಲ್ಲಿ ದೋಟಿ ಸಾಗಿಸಿ.
  • Nobody goes up the trunk for the bunch.ಗೊನೆ ಕೊಯ್ಯಲು ಯಾರೂ ಮರದ ಕಾಂಡ ಹತ್ತುವ ಅಗತ್ಯವಿಲ್ಲ.
  • Works on arecanut and coconut palms.ಅಡಿಕೆ ಮತ್ತು ತೆಂಗು ಎರಡೂ ಮರಗಳಿಗೂ ಅತ್ಯಂತ ಉಪಯುಕ್ತ.

Ground work — spraying rounds at ground level, weeding, mowing, hauling harvest or fertiliser — is not a doti job. That is what the Rancher SEV 5.1 is built for. ನೆಲದ ಮೇಲಿನ ಕೆಲಸಗಳಿಗೆ — ಅಂದರೆ ಬುಡಕ್ಕೆ ಮದ್ದು ಹೊಡೆಯುವುದು, ಕಳೆ ಕೀಳುವುದು, ಹುಲ್ಲು ಕತ್ತರಿಸುವುದು ಅಥವಾ ಗೊಬ್ಬರ ಸಾಗಿಸಲು ದೋಟಿ ಬಳಸಲಾಗುವುದಿಲ್ಲ. ಅಂತಹ ಕೆಲಸಗಳಿಗಾಗಿ 'ರಾಂಚರ್ SEV 5.1' ಯಂತ್ರವನ್ನು ರೂಪಿಸಲಾಗಿದೆ.

Why farmers consider itರೈತರ ಆಯ್ಕೆಗೆ ಕಾರಣಗಳು

Six practical reasons.ಆರು ನೇರ, ವಾಸ್ತವಿಕ ಅನುಕೂಲಗಳು.

No climber neededಮರ ಹತ್ತುವವರ ಹಂಗಿಲ್ಲ

Harvest on your own schedule, even when labour is scarce.ಕೂಲಿ ಆಳುಗಳ ಕೊರತೆಯಿದ್ದರೂ ನಿಮ್ಮ ಸಮಯಕ್ಕೆ ಸರಿಯಾಗಿ ನೀವೇ ಕೊಯ್ಲು ಮಾಡಿಕೊಳ್ಳಿ.

Safer operationಪೂರ್ಣ ಸುರಕ್ಷತೆ

Feet stay on the ground. No risky tree climbing for the work the doti does.ಕಾಲುಗಳು ನೆಲದಲ್ಲೇ ಇರುತ್ತವೆ. ಮರ ಹತ್ತುವಾಗ ಎದುರಾಗುವ ಪ್ರಾಣಾಪಾಯದ ಆತಂಕವಿಲ್ಲ.

Faster harvestingವೇಗವಾದ ಕೊಯ್ಲು

Move pole-to-palm across the garden in seconds.ತೋಟದಲ್ಲಿ ಮರದಿಂದ ಮರಕ್ಕೆ ಕೆಲವೇ ಸೆಕೆಂಡುಗಳಲ್ಲಿ ಸರಾಗವಾಗಿ ಸಾಗಬಹುದು.

Pays for itselfಹೂಡಿಕೆ ಮಾಡಿದ ಹಣ ವಾಪಸ್

Saved climbing labour adds up every season.ಪ್ರತಿ ಸೀಸನ್‌ನಲ್ಲೂ ಮರ ಹತ್ತುವ ಕೂಲಿ ಉಳಿಯುವುದರಿಂದ ದೋಟಿಯ ಬೆಲೆ ಬೇಗನೆ ವಸೂಲಾಗುತ್ತದೆ.

Light to handleಹಿಡಿಯಲು ಅತ್ಯಂತ ಹಗುರ

1.25 to 1.95 kg by grade — less fatigue, so you work longer.ಕೇವಲ 1.25 ರಿಂದ 1.95 ಕೆಜಿ ತೂಕ — ಕೈ ಸುಸ್ತಾಗುವುದಿಲ್ಲ, ಹೆಚ್ಚು ಹೊತ್ತು ಕೆಲಸ ಮಾಡಬಹುದು.

Made for Indian farmsನಮ್ಮದೇ ನೆಲದ ಕೃಷಿಗಾಗಿ ವಿನ್ಯಾಸ

Engineered and serviced in Shivamogga, Karnataka.ಕರ್ನಾಟಕದ ಶಿವಮೊಗ್ಗದಲ್ಲೇ ಕೃಷಿಕರ ಅಗತ್ಯಕ್ಕೆ ತಕ್ಕಂತೆ ವಿನ್ಯಾಸ ಮತ್ತು ಸರ್ವೀಸ್ ಬೆಂಬಲ.

What it is worth on your farmನಿಮ್ಮ ತೋಟಕ್ಕೆ ಇದು ಎಷ್ಟು ಲಾಭದಾಯಕ?

Keelambi does not publish a payback figure for the Doti, because the number that matters is yours: what you pay for climbing labour in one round, multiplied by the rounds you do in a season. Set that against a one-time cost from ₹38,900, and add the rounds you currently skip or delay because nobody was available. That is the honest comparison — we would rather you do it than take a number from us. ದೋಟಿಯಿಂದ ಇಂತಿಷ್ಟೇ ಹಣ ಉಳಿಯುತ್ತದೆ ಎಂದು ಕೀಳಂಬಿ ಮುಂಚಿತವಾಗಿ ಕಾಗದದ ಮೇಲೆ ಲೆಕ್ಕ ಹಾಕುವುದಿಲ್ಲ. ಏಕೆಂದರೆ ಆ ಲೆಕ್ಕ ನಿಮ್ಮ ತೋಟಕ್ಕೆ ಸಂಬಂಧಿಸಿದ್ದು: ಒಂದು ಸುತ್ತಿಗೆ ನೀವು ಮರ ಹತ್ತುವವರಿಗೆ ಕೊಡುವ ಕೂಲಿ ಮತ್ತು ಒಂದು ಸೀಸನ್‌ನಲ್ಲಿ ಮಾಡುವ ಒಟ್ಟು ಸುತ್ತುಗಳನ್ನು ಗುಣಿಸಿ. ಅದನ್ನು ₹38,900 ಆರಂಭಿಕ ದರಕ್ಕೆ ಹೋಲಿಸಿ ನೋಡಿ. ಜೊತೆಗೆ ಆಳು ಸಿಗದೆ ತಡವಾಗಿ ನಷ್ಟವಾದ ಬೆಳೆಯ ಮೌಲ್ಯವನ್ನೂ ಸೇರಿಸಿ. ಇದುವೇ ನಿಜವಾದ ಲೆಕ್ಕಾಚಾರ — ಲೆಕ್ಕವನ್ನು ನೀವೇ ಹಾಕಿ ನೋಡುವುದು ನಮಗೆ ಸಮ್ಮತ.

Keelambi's savings calculator covers the Rancher SEV 5.1 machine, not the Doti — see it here if ground work is also on your mind. ಕೀಳಂಬಿಯ ಉಳಿತಾಯ ಕ್ಯಾಲ್ಕುಲೇಟರ್ ರಾಂಚರ್ SEV 5.1 ಯಂತ್ರಕ್ಕೆ ಅನ್ವಯಿಸುತ್ತದೆ — ನೆಲದ ಕೆಲಸಗಳಿಗೂ ಪರಿಹಾರ ಬೇಕಿದ್ದರೆ ಇಲ್ಲಿ ನೋಡಿ.

The productಉತ್ಪನ್ನ

Photographed at the Shivamogga showroom.ಶಿವಮೊಗ್ಗ ಶೋರೂಮಿನಲ್ಲಿ ತೆಗೆದ ಚಿತ್ರಗಳು.

Rancher Doti poles standing side by side with the grade codes CFP-60, CFP-70 and CFP-80 printed on each red shaft
CFP-60, CFP-70 and CFP-80 together. Every pole carries its grade code where you can read it.CFP-60, CFP-70 ಮತ್ತು CFP-80 ಒಟ್ಟಿಗೆ. ಪ್ರತಿ ದೋಟಿಯ ಮೇಲೆ ಅದರ ಗ್ರೇಡ್ ಕೋಡ್ ಕಾಣುವಂತೆ ಇದೆ.
A full Rancher Doti CFP-70 closed to transport length, showing the clamp stack and the GripTact marking near the base
A CFP-70, closed. About 4.7 ft packed down — six sections of carbon fibre inside one another.ಮಡಚಿದ CFP-70. ಸುಮಾರು 4.7 ಅಡಿ — ಆರು ಕಾರ್ಬನ್ ಫೈಬರ್ ವಿಭಾಗಗಳು ಒಂದರೊಳಗೊಂದು.
Macro view of the Rancher Doti double-lock clamps, red levers paired down the black collar section
The clamps, close up. Two independent locks at every joint.ಕ್ಲ್ಯಾಂಪ್‌ಗಳ ಹತ್ತಿರದ ನೋಟ. ಪ್ರತಿ ಜಂಟಿಗೂ ಎರಡು ಸ್ವತಂತ್ರ ಲಾಕ್.

Photographs of the real product at the Keelambi showroom, Shivamogga. The studio and plantation photography is higher up this page.ಶಿವಮೊಗ್ಗದ ಕೀಳಂಬಿ ಶೋರೂಮಿನಲ್ಲಿರುವ ನಿಜವಾದ ಉತ್ಪನ್ನದ ಚಿತ್ರಗಳು. ಸ್ಟುಡಿಯೋ ಮತ್ತು ತೋಟದ ಚಿತ್ರಗಳು ಈ ಪುಟದ ಮೇಲ್ಭಾಗದಲ್ಲಿವೆ.

Questions farmers askರೈತರು ಕೇಳುವ ಪ್ರಶ್ನೆಗಳು

Straight answers.ನೇರ ಉತ್ತರಗಳು.

What is a doti used for?ದೋಟಿಯನ್ನು ಯಾವುದಕ್ಕೆ ಬಳಸುತ್ತಾರೆ?
To cut arecanut and coconut bunches down from a tall palm while standing on the ground. A blade sits at the top of a long pole. In Karnataka the tool is called a doti (ದೋಟಿ); farmers also say gala, arecanut pole or harvesting pole.ನೆಲದ ಮೇಲೆ ನಿಂತೇ ಎತ್ತರದ ಮರದಿಂದ ಅಡಿಕೆ ಮತ್ತು ತೆಂಗಿನ ಗೊನೆ ಕೊಯ್ಯಲು. ಉದ್ದದ ಕೋಲಿನ ತುದಿಯಲ್ಲಿ ಕೊಯ್ತೆ ಇರುತ್ತದೆ. ಕರ್ನಾಟಕದಲ್ಲಿ ಇದನ್ನು ದೋಟಿ ಎನ್ನುತ್ತಾರೆ; ಗಳ, ಅಡಿಕೆ ಕೋಲು ಎಂದೂ ಕರೆಯುತ್ತಾರೆ.
What is a carbon fibre doti?ಕಾರ್ಬನ್ ಫೈಬರ್ ದೋಟಿ ಎಂದರೇನು?
The same tool, built from carbon fibre instead of bamboo or aluminium. Rancher Doti uses a high-modulus carbon fibre Keelambi calls Carbotex-HM — which is why a pole reaching 80 feet weighs about 1.95 kg and one person can work with it through the day.ಅದೇ ಸಾಧನ, ಬಿದಿರು ಅಥವಾ ಅಲ್ಯೂಮಿನಿಯಂ ಬದಲಿಗೆ ಕಾರ್ಬನ್ ಫೈಬರ್‌ನಿಂದ ಮಾಡಿದ್ದು. ರಾಂಚರ್ ದೋಟಿ Carbotex-HM ಎಂಬ ಹೈ-ಮಾಡ್ಯುಲಸ್ ಕಾರ್ಬನ್ ಫೈಬರ್ ಬಳಸುತ್ತದೆ — ಹಾಗಾಗಿ 80 ಅಡಿ ತಲುಪುವ ದೋಟಿಯ ತೂಕ ಸುಮಾರು 1.95 ಕೆ.ಜಿ, ಒಬ್ಬರೇ ದಿನವಿಡೀ ಕೆಲಸ ಮಾಡಬಹುದು.
Can a doti be used for arecanut spraying?ದೋಟಿಯಿಂದ ಅಡಿಕೆಗೆ ಮದ್ದು ಹೊಡೆಯಬಹುದೇ?
Yes. Rancher Doti takes a spray head as well as the cutting koythe, so the same telescopic pole is used for high-reach spraying. Keelambi names areca and pepper. Spray-head details and price are confirmed per order — ask the team.ಹೌದು. ಕೊಯ್ತೆಯ ಜೊತೆಗೆ ರಾಂಚರ್ ದೋಟಿಗೆ ಸ್ಪ್ರೇ ಹೆಡ್ ಸಹ ಜೋಡಿಸಬಹುದು, ಹಾಗಾಗಿ ಇದೇ ದೋಟಿ ಎತ್ತರದ ಸಿಂಪಡಣೆಗೂ ಬಳಕೆಯಾಗುತ್ತದೆ. ಕೀಳಂಬಿ ಅಡಿಕೆ ಮತ್ತು ಮೆಣಸನ್ನು ಹೆಸರಿಸುತ್ತದೆ. ಸ್ಪ್ರೇ ಹೆಡ್ ವಿವರ ಮತ್ತು ಬೆಲೆಯನ್ನು ಆರ್ಡರ್‌ಗೆ ತಕ್ಕಂತೆ ತಂಡ ಖಚಿತಪಡಿಸುತ್ತದೆ.
Which grade suits my trees?ನನ್ನ ಮರಗಳಿಗೆ ಯಾವ ಗ್ರೇಡ್ ಸೂಕ್ತ?
Match it to your tallest palms, not to the grade number — the number is the pole's reach, and you need working reach above the bunch. Trees up to about 35 ft take the CFP-50; 25–45 ft the CFP-60; 35–60 ft the CFP-70; 45–70+ ft the CFP-80. Mixed heights: take the taller grade.ಗ್ರೇಡ್ ಸಂಖ್ಯೆ ನೋಡಿ ಅಲ್ಲ, ನಿಮ್ಮ ಅತಿ ಎತ್ತರದ ಮರ ನೋಡಿ ಆರಿಸಿ — ಸಂಖ್ಯೆ ದೋಟಿ ತಲುಪುವ ಎತ್ತರ, ಗೊನೆಯ ಮೇಲೆ ಕೆಲಸ ಮಾಡುವಷ್ಟು ಜಾಗ ಬೇಕು. 35 ಅಡಿಯವರೆಗಿನ ಮರಕ್ಕೆ CFP-50; 25–45 ಅಡಿಗೆ CFP-60; 35–60 ಅಡಿಗೆ CFP-70; 45–70+ ಅಡಿಗೆ CFP-80. ಬೇರೆ ಬೇರೆ ಎತ್ತರವಿದ್ದರೆ ದೊಡ್ಡ ಗ್ರೇಡ್ ತೆಗೆದುಕೊಳ್ಳಿ.
How much does Rancher Doti cost?ರಾಂಚರ್ ದೋಟಿಯ ಬೆಲೆ ಎಷ್ಟು?
From ₹38,900 for the CFP-50, ₹43,600 for the CFP-60, ₹53,500 for the CFP-70 and ₹59,900 for the CFP-80. These are indicative from-prices — the final figure depends on the grade and accessories you choose, and the Keelambi team confirms it.CFP-50 ಗೆ ₹38,900 ರಿಂದ, CFP-60 ಗೆ ₹43,600, CFP-70 ಗೆ ₹53,500 ಮತ್ತು CFP-80 ಗೆ ₹59,900 ರಿಂದ. ಇವು ಸೂಚಕ ಆರಂಭಿಕ ಬೆಲೆಗಳು — ನೀವು ಆರಿಸುವ ಗ್ರೇಡ್ ಮತ್ತು ಸಾಧನಗಳ ಪ್ರಕಾರ ಅಂತಿಮ ಬೆಲೆ ಬದಲಾಗುತ್ತದೆ, ಕೀಳಂಬಿ ತಂಡ ಅದನ್ನು ಖಚಿತಪಡಿಸುತ್ತದೆ.
How heavy is it, and how does it travel?ತೂಕ ಎಷ್ಟು, ಸಾಗಿಸುವುದು ಹೇಗೆ?
Between about 1.25 kg (CFP-50) and 1.95 kg (CFP-80). Closed, every grade packs down to roughly 4.5–4.8 feet, so it travels on a two-wheeler.ಸುಮಾರು 1.25 ಕೆ.ಜಿ (CFP-50) ರಿಂದ 1.95 ಕೆ.ಜಿ (CFP-80). ಮಡಚಿದಾಗ ಎಲ್ಲಾ ಗ್ರೇಡ್‌ಗಳೂ ಸುಮಾರು 4.5–4.8 ಅಡಿಗೆ ಬರುತ್ತವೆ, ದ್ವಿಚಕ್ರ ವಾಹನದಲ್ಲೂ ಸಾಗಿಸಬಹುದು.
Is it a machine? Does it need power?ಇದು ಯಂತ್ರವೇ? ವಿದ್ಯುತ್ ಬೇಕೇ?
No. Rancher Doti is a hand-held pole — no motor, no battery, no electronics, nothing to charge. It extends, locks, and is worked from the ground.ಇಲ್ಲ. ರಾಂಚರ್ ದೋಟಿ ಕೈಯಲ್ಲಿ ಹಿಡಿಯುವ ಸಾಧನ — ಮೋಟಾರ್ ಇಲ್ಲ, ಬ್ಯಾಟರಿ ಇಲ್ಲ, ಚಾರ್ಜ್ ಮಾಡುವುದೂ ಇಲ್ಲ. ಚಾಚಿ, ಲಾಕ್ ಮಾಡಿ, ನೆಲದಿಂದಲೇ ಕೆಲಸ ಮಾಡುತ್ತೀರಿ.
Does it remove the need to climb?ಮರ ಹತ್ತುವ ಅಗತ್ಯವನ್ನು ಇದು ತಪ್ಪಿಸುತ್ತದೆಯೇ?
For the work it does — cutting bunches and high-reach spraying — the operator stays on the ground and nobody climbs. Keelambi's published safety points are exactly two: feet stay on the ground, and the double-lock clamp system uses two independent locks at every joint. Anything beyond those two, ask us rather than assume.ಇದು ಮಾಡುವ ಕೆಲಸಕ್ಕೆ — ಗೊನೆ ಕೊಯ್ಯುವುದು ಮತ್ತು ಎತ್ತರದ ಸಿಂಪಡಣೆ — ಬಳಸುವವರು ನೆಲದ ಮೇಲೆಯೇ ಇರುತ್ತಾರೆ, ಯಾರೂ ಮರ ಹತ್ತಬೇಕಿಲ್ಲ. ಕೀಳಂಬಿ ಪ್ರಕಟಿಸಿರುವ ಸುರಕ್ಷತಾ ಅಂಶಗಳು ಎರಡೇ: ಪಾದಗಳು ನೆಲದ ಮೇಲೆ, ಮತ್ತು ಪ್ರತಿ ಜಂಟಿಗೂ ಎರಡು ಸ್ವತಂತ್ರ ಲಾಕ್. ಅದನ್ನು ಮೀರಿದ ಯಾವುದೇ ಪ್ರಶ್ನೆಗೆ ಊಹಿಸದೆ ನಮ್ಮನ್ನು ಕೇಳಿ.
Where can I see one before buying?ಖರೀದಿಸುವ ಮೊದಲು ಎಲ್ಲಿ ನೋಡಬಹುದು?
CFP-60, CFP-70 and CFP-80 are at the Keelambi showroom — Nehru Road 2nd Cross, Garden Area, Shivamogga 577201. Keelambi also runs demos on farms across Karnataka. Message us and the team will fix a time.CFP-60, CFP-70 ಮತ್ತು CFP-80 ಕೀಳಂಬಿ ಶೋರೂಮಿನಲ್ಲಿವೆ — ನೆಹರೂ ರಸ್ತೆ 2ನೇ ಕ್ರಾಸ್, ಗಾರ್ಡನ್ ಏರಿಯಾ, ಶಿವಮೊಗ್ಗ 577201. ಕರ್ನಾಟಕದಾದ್ಯಂತ ತೋಟಗಳಲ್ಲಿ ಡೆಮೋ ಸಹ ನಡೆಸುತ್ತೇವೆ. ಸಂದೇಶ ಕಳುಹಿಸಿ, ತಂಡ ಸಮಯ ನಿಗದಿ ಮಾಡುತ್ತದೆ.
How do I buy one?ಖರೀದಿಸುವುದು ಹೇಗೆ?
Buy from the official Rancher store online — the Buy buttons on this page open it — or message or call 843 11 33 888 with the height of your tallest palms. The team confirms the grade, the final price, and answers subsidy, warranty and delivery questions for your district. Kannada and English.ಅಧಿಕೃತ ರಾಂಚರ್ ಸ್ಟೋರ್‌ನಲ್ಲಿ ಆನ್‌ಲೈನ್ ಖರೀದಿಸಬಹುದು — ಈ ಪುಟದ ಖರೀದಿಸಿ ಬಟನ್ ಅದನ್ನು ತೆರೆಯುತ್ತದೆ. ಅಥವಾ ನಿಮ್ಮ ಅತಿ ಎತ್ತರದ ಮರದ ಎತ್ತರವನ್ನು ತಿಳಿಸಿ 843 11 33 888 ಗೆ ಸಂದೇಶ ಅಥವಾ ಕರೆ ಮಾಡಿ. ತಂಡ ಗ್ರೇಡ್, ಅಂತಿಮ ಬೆಲೆಯನ್ನು ಖಚಿತಪಡಿಸಿ, ನಿಮ್ಮ ಜಿಲ್ಲೆಗೆ ಸಬ್ಸಿಡಿ, ವಾರಂಟಿ ಮತ್ತು ಡೆಲಿವರಿ ಪ್ರಶ್ನೆಗಳಿಗೆ ಉತ್ತರಿಸುತ್ತದೆ. ಕನ್ನಡ ಮತ್ತು ಇಂಗ್ಲಿಷ್.
Price & buyingಬೆಲೆ ಮತ್ತು ಖರೀದಿ

Four grades. One price list. No haggling required.ನಾಲ್ಕು ಗ್ರೇಡ್. ಒಂದೇ ಬೆಲೆ ಪಟ್ಟಿ. ಚೌಕಾಶಿ ಬೇಕಿಲ್ಲ.

Selected · CFP-70ಆಯ್ಕೆ · CFP-70 ₹53,500 ₹74,000 27% OFF27% ಉಳಿತಾಯ Instant factory savings of ₹20,500 · Incl. all taxes₹20,500 ಉಳಿತಾಯ · GST ಮತ್ತು ತೆರಿಗೆ ಸೇರಿದಂತೆ

Indicative from-price. Change the grade in Choose your reach. ಸೂಚಕ ಆರಂಭಿಕ ಬೆಲೆ. ನಿಮ್ಮ ಎತ್ತರ ಆರಿಸಿ ವಿಭಾಗದಲ್ಲಿ ಗ್ರೇಡ್ ಬದಲಾಯಿಸಿ.

Buying runs through the official Rancher store, or on WhatsApp and the phone — Kannada or English. The team confirms your grade and the final price. Call 843 11 33 888. ಖರೀದಿ ಅಧಿಕೃತ ರಾಂಚರ್ ಸ್ಟೋರ್ ಮೂಲಕ, ಅಥವಾ WhatsApp ಮತ್ತು ಫೋನ್ ಮೂಲಕ — ಕನ್ನಡ ಅಥವಾ ಇಂಗ್ಲಿಷ್. ತಂಡ ನಿಮ್ಮ ಗ್ರೇಡ್ ಮತ್ತು ಅಂತಿಮ ಬೆಲೆಯನ್ನು ಖಚಿತಪಡಿಸುತ್ತದೆ. ಕರೆ: 843 11 33 888.

Ask us these before you orderಆರ್ಡರ್ ಮಾಡುವ ಮೊದಲು ಇವನ್ನು ಕೇಳಿ

Keelambi does not publish these on the website, so we would rather you ask than assume. The team answers them for your grade and your district. ಇವನ್ನು ಕೀಳಂಬಿ ವೆಬ್‌ಸೈಟಿನಲ್ಲಿ ಪ್ರಕಟಿಸಿಲ್ಲ, ಹಾಗಾಗಿ ಊಹಿಸುವ ಬದಲು ಕೇಳಿ. ನಿಮ್ಮ ಗ್ರೇಡ್ ಮತ್ತು ಜಿಲ್ಲೆಗೆ ತಂಡ ಉತ್ತರಿಸುತ್ತದೆ.

  • Warranty — the terms that apply to your Doti.ವಾರಂಟಿ — ನಿಮ್ಮ ದೋಟಿಗೆ ಅನ್ವಯವಾಗುವ ಷರತ್ತುಗಳು.
  • Subsidy — Keelambi will check which farm-mechanisation schemes apply in your district. We do not name a scheme until it is confirmed for you.ಸಬ್ಸಿಡಿ — ನಿಮ್ಮ ಜಿಲ್ಲೆಯಲ್ಲಿ ಯಾವ ಕೃಷಿ ಯಾಂತ್ರೀಕರಣ ಯೋಜನೆಗಳು ಅನ್ವಯವಾಗುತ್ತವೆ ಎಂದು ಕೀಳಂಬಿ ಪರಿಶೀಲಿಸುತ್ತದೆ. ಖಚಿತವಾಗುವವರೆಗೆ ನಾವು ಯಾವ ಯೋಜನೆಯ ಹೆಸರನ್ನೂ ಹೇಳುವುದಿಲ್ಲ.
  • Spray head — price, and whether it comes with the pole.ಸ್ಪ್ರೇ ಹೆಡ್ — ಬೆಲೆ, ಮತ್ತು ಅದು ದೋಟಿಯ ಜೊತೆ ಬರುತ್ತದೆಯೇ.
  • Replacement koythe blades — price and supply.ಬದಲಿ ಕೊಯ್ತೆ — ಬೆಲೆ ಮತ್ತು ಲಭ್ಯತೆ.
  • Delivery — tell us your taluk and the team will confirm what is possible.ಡೆಲಿವರಿ — ನಿಮ್ಮ ತಾಲ್ಲೂಕು ತಿಳಿಸಿ, ಏನು ಸಾಧ್ಯ ಎಂದು ತಂಡ ಖಚಿತಪಡಿಸುತ್ತದೆ.
Who makes itಯಾರು ತಯಾರಿಸುತ್ತಾರೆ

Rancher is Keelambi's own brand. Not a trading name.ರಾಂಚರ್ ಎಂಬುದು ಕೀಳಂಬಿಯ ಸ್ವಂತ ಬ್ರ್ಯಾಂಡ್. ಕೇವಲ ಒಂದು ಹೆಸರಲ್ಲ.

Keelambi Agritech Private Limited builds farm machinery and tools for plantation farmers in Karnataka, under the mission "Mission Profitable Farming". Rancher is the brand Keelambi puts on what it builds itself — currently the Rancher SEV 5.1 electric farm machine and the Rancher Doti. ಕೀಳಂಬಿ ಅಗ್ರಿಟೆಕ್ ಪ್ರೈವೇಟ್ ಲಿಮಿಟೆಡ್ ಕರ್ನಾಟಕದ ತೋಟದ ರೈತರಿಗಾಗಿ ಯಂತ್ರಗಳು ಮತ್ತು ಸಾಧನಗಳನ್ನು ತಯಾರಿಸುತ್ತದೆ — "ಲಾಭದಾಯಕ ಕೃಷಿಯೇ ನಮ್ಮ ಗುರಿ" ಎಂಬ ಧ್ಯೇಯದೊಂದಿಗೆ. ತಾನೇ ತಯಾರಿಸುವುದಕ್ಕೆ ಕೀಳಂಬಿ ಇಡುವ ಬ್ರ್ಯಾಂಡ್ ಹೆಸರೇ ರಾಂಚರ್ — ಈಗ ರಾಂಚರ್ SEV 5.1 ಎಲೆಕ್ಟ್ರಿಕ್ ಯಂತ್ರ ಮತ್ತು ರಾಂಚರ್ ದೋಟಿ.

See it in Shivamoggaಶಿವಮೊಗ್ಗದಲ್ಲಿ ನೋಡಿ

Nehru Road 2nd Cross, Garden Area, Shivamogga, Karnataka 577201. CFP-60, CFP-70 and CFP-80 are on display.ನೆಹರೂ ರಸ್ತೆ 2ನೇ ಕ್ರಾಸ್, ಗಾರ್ಡನ್ ಏರಿಯಾ, ಶಿವಮೊಗ್ಗ, ಕರ್ನಾಟಕ 577201. CFP-60, CFP-70 ಮತ್ತು CFP-80 ಪ್ರದರ್ಶನದಲ್ಲಿವೆ.

Talk to a personವ್ಯಕ್ತಿಯೊಂದಿಗೆ ಮಾತನಾಡಿ

Call or WhatsApp 843 11 33 888. Kannada and English, farm hours.ಕರೆ ಅಥವಾ WhatsApp: 843 11 33 888. ಕನ್ನಡ ಮತ್ತು ಇಂಗ್ಲಿಷ್, ತೋಟದ ಸಮಯದಲ್ಲಿ.

Engineered and serviced hereಇಲ್ಲಿಯೇ ವಿನ್ಯಾಸ ಮತ್ತು ಸೇವೆ

Rancher Doti is engineered and serviced in Shivamogga — the same district as most of the gardens it works in.ರಾಂಚರ್ ದೋಟಿಯ ವಿನ್ಯಾಸ ಮತ್ತು ಸೇವೆ ಶಿವಮೊಗ್ಗದಲ್ಲೇ — ಇದು ಕೆಲಸ ಮಾಡುವ ಬಹುತೇಕ ತೋಟಗಳ ಜಿಲ್ಲೆಯಲ್ಲೇ.

Rancher Doti is used across the arecanut and coconut belt of Karnataka — Malnad and coastal districts, the Western Ghats gardens, and the plantations around Shivamogga, Chikkamagaluru and Davanagere. ಕರ್ನಾಟಕದ ಅಡಿಕೆ ಮತ್ತು ತೆಂಗಿನ ಪ್ರದೇಶಗಳಲ್ಲಿ ರಾಂಚರ್ ದೋಟಿ ಬಳಕೆಯಾಗುತ್ತದೆ — ಮಲೆನಾಡು ಮತ್ತು ಕರಾವಳಿ ಜಿಲ್ಲೆಗಳು, ಪಶ್ಚಿಮ ಘಟ್ಟದ ತೋಟಗಳು, ಮತ್ತು ಶಿವಮೊಗ್ಗ, ಚಿಕ್ಕಮಗಳೂರು, ದಾವಣಗೆರೆ ಸುತ್ತಮುತ್ತಲಿನ ತೋಟಗಳು.

Your trees don't have to wait for a climber. ನಿಮ್ಮ ಮರಗಳು ಮರ ಹತ್ತುವವರಿಗಾಗಿ ಕಾಯಬೇಕಿಲ್ಲ.

Tell us how tall your tallest palms are. We will tell you the grade, the price, and honestly say if the Doti is not the right tool for your problem. ನಿಮ್ಮ ಅತಿ ಎತ್ತರದ ಮರ ಎಷ್ಟು ಅಡಿ ಎಂದು ತಿಳಿಸಿ. ಗ್ರೇಡ್ ಮತ್ತು ಬೆಲೆ ಹೇಳುತ್ತೇವೆ — ದೋಟಿ ನಿಮ್ಮ ಸಮಸ್ಯೆಗೆ ಸರಿಯಾದ ಸಾಧನವಲ್ಲದಿದ್ದರೆ ಅದನ್ನೂ ಪ್ರಾಮಾಣಿಕವಾಗಿ ಹೇಳುತ್ತೇವೆ.

More from Keelambi: all products · SEV 5.1 attachments · savings calculator · Keelambi TV ಕೀಳಂಬಿಯಿಂದ ಇನ್ನಷ್ಟು: ಎಲ್ಲಾ ಉತ್ಪನ್ನಗಳು · SEV 5.1 ಸಾಧನಗಳು · ಉಳಿತಾಯ ಕ್ಯಾಲ್ಕುಲೇಟರ್ · ಕೀಳಂಬಿ TV

₹53,500 ₹74,000
Buyಖರೀದಿಸಿ